ಎಲ್ಯಾಟೆರಿಯಂ: ಎಕ್ಬಾಲಿಯಂ ಎಲ್ಯಾಟೆರಿಯಂ ಎಂಬ ಮೆಡಿಟರೇನಿಯನ್ ಪ್ರದೇಶದ ಸರ್ವಋತು ಬಳ್ಳಿಯಿಂದ ತೆಗೆದ ಬೂದು ಛಾಯೆಯ ಹಸುರು ಬಣ್ಣದ ಕಹಿ ಪದಾರ್ಥ. ಇದು ಭೇದಿ ಮಾಡಿಸುವ ಔಷಧಿ. ಆಲ್ಕೊಹಾಲಿನಲ್ಲಿ ಇದನ್ನು ಸಂಸ್ಕರಿಸಿ ಎಲ್ಯಾಟೆರಿನನ್ನು ಪಡೆಯುತ್ತಾರೆ. ಈ ಎಲ್ಯಾಟೆರಿನಿನಲ್ಲಿ ಚಿ-ಮತ್ತು b-ಎಲ್ಯಾಟೆರಿನುಗಳೆರಡೂ ಇರುತ್ತವೆ. ಎಲ್ಯಾಟೆರಿನಿನ ಕರಗುವ ಬಿಂದು 2200ಸೆ. ಇದರಿಂದ ಮಾನವನ ಶರೀರದ ಮೇಲೆ ಯಾವ ಪ್ರಭಾವವೂ ಇಲ್ಲ. ಎಲ್ಯಾಟೆರಿನಿನ ಕರಗುವ ಬಿಂದು ಬಹು ಕೆಳಗಿರುತ್ತದೆ. ಅದಕ್ಕೆ ವಿರೇಚಕ ಗುಣವಿದೆ. ಮಾರುಕಟ್ಟೆಯ ಎಲ್ಯಾಟೆರಿನಿನಲ್ಲಿ ಶೇ. 60-80ಭಾಗ ಕ್ರಿಯಾಶಕ್ತವಲ್ಲದ ಎಲ್ಯಾಟೆರಿನ್ನೇ ಇರುತ್ತದೆ.       (ಎಂ.ಆರ್.ಆರ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ